ಸಿಂದಗಿ : ನಗರದ ಮನಗೂಳಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಬೆಳೆದ ಸುಮಾರು 3.5 ಕೆಜಿ ತೂಕದ ಗರ್ಭಕೋಶಕ್ಕೆ ಸಂಬಂಧಿಸಿದ ಗಡ್ಡೆಯೊಂದನ್ನು ಸತತ ಮೂರುವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆದಿದೆ.
ಸಿಂದಗಿ ನಗರದ ಮನಗೂಳಿ ಆಸ್ಪತ್ರೆಯ ವೈದ್ಯರು ಸತತ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆ ಗರ್ಭಕೋಶಕ್ಕೆ ಸಂಬಂಧಿಸಿದ 3.5 ಕೆಜಿ ತೂಕದ ಗಡ್ಡೆಯೊಂದನ್ನು ವೈದ್ಯರಾದ ಡಾ.ಸಂಧ್ಯಾ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ರಮಾಕಂತ ತಂಡದ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಯಾಸ್ಮಿನ್ ಭಾಗವಾನ್ ಎಂಬ ಮಹಿಳೆಯ ಉದರದಿಂದ 3.5 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.
ಅರವಳಿಕೆ ತಜ್ಞರಾದ ಡಾ. ರವಿ ಗುಣಕಿ, ಸಹಾಯಕ ಪಿರಾ ಮಗರಬಿ ಬಸವರಾಜ್ ಸೇರಿದಂತೆ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಈಗ ರೋಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ. ಮನಗೂಳಿ ಆಸ್ಪತ್ರೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂರುವರಿ ಕೆಜಿ ತೂಕದ ಗಡ್ಡೆಗೆ ಮೂರುವರೆ ಗಂಟೆ ಸಪಲ ಶಸ್ತ್ರ ಚಿಕಿತ್ಸೆ
14
previous post